'ಜೀವನದ ಪಯಣ' ನಿಮಗೆ ಉದಾಸೀನತೆ ಅಥವಾ ತಾತ್ವಿಕ ಭಾವನೆಗಳನ್ನು ಉಂಟುಮಾಡುತ್ತಿದೆಯೇ?
ಇದು ಅಂತದ್ದೇನೂ ಅಲ್ಲ.
ಈ ಒಂದು ಪುಟದ ಟಿಪ್ಪಣಿಯು ನನ್ನ ಅನುಭವ, ತಜ್ಞರೊಂದಿಗಿನ ಸಂಭಾಷಣೆಗಳು ಮತ್ತು ವಿವಿಧ ಸೂಕ್ತ ಮೂಲಗಳಿಂದ ಕಲಿತ ಕಲಿಕೆಯ ಸಂಕ್ಷಿಪ್ತ ರೂಪವಾಗಿದೆ.
ಇದು ಸ್ನೇಹಿತರೊಂದಿಗಿನ ಉತ್ತಮ ಸಂಭಾಷಣೆಯಂತೆ ಹೊರಹೊಮ್ಮಲಿದೆ.
ನನಗೆ ಹಾಗನ್ನಿಸುತ್ತಿದೆ, ನಿಮಗೆ?
ನಿಸ್ಸಂದೇಹವಾಗಿ, ಮನುಷ್ಯನು ಉತ್ತಮ ಜೀವನವನ್ನು ನಡೆಸಲು ಶಿಕ್ಷಣವನ್ನು ಪಡೆಯಬೇಕು. ಆದರೆ ಶಿಕ್ಷಣ/ ವಿದ್ಯೆ ಎಂದರೇನು?
ನಮ್ಮ ಹೆಸರಿನಲ್ಲಿ ಎಷ್ಟು ಶಾಲೆಗಳು, ಕಾಲೇಜುಗಳು ಅಥವಾ ಕೋರ್ಸ್ಗಳ ಪ್ರಮಾಣಪತ್ರಗಳನ್ನು ಹೊಂದಿದ್ದೇವೆ ಎಂಬುದಂತೂ ಅಲ್ಲ ತಾನೇ.
ಆರಂಭಿಕ ಔಪಚಾರಿಕ ಶಿಕ್ಷಣವು ಬಟ್ಟೆ, ಆಹಾರ, ವಸತಿ, ಗಣಿತ ಅಥವಾ ವಿಜ್ಞಾನದ ಪ್ರಾಮುಖ್ಯತೆಯನ್ನು ಕಲಿಸುತ್ತದೆಯಾದರೂ, ಅದು ಕ್ರಮೇಣ ಮನಸ್ಸನ್ನು ಸಂಕುಚಿತ ಪೆಟ್ಟಿಗೆಯಂತೆ ರೂಪಿಸುತ್ತದೆ. ನಂತರ ಅದು ಸ್ವತಂತ್ರವಾಗಿ ವೀಕ್ಷಿಸಲು ಮತ್ತು ಯೋಚಿಸಲು ಹೆಣಗಾಡುತ್ತದೆ.
ಆರಂಭಿಕ ಔಪಚಾರಿಕ ಶಿಕ್ಷಣವು ನಿಷ್ಪ್ರಯೋಜಕವಾಗಿದೆ ಎಂದು ನಾನು ಹೇಳುತ್ತಿದ್ದೇನೆಯೇ? ಖಂಡಿತವಾಗಿಯೂ ಅಲ್ಲ. ಪ್ರಪಂಚದ ಕೆಲವು ಪ್ರಸಿದ್ಧ ವ್ಯಕ್ತಿಗಳಂತೆ ಯುವಕರು ಶಾಲೆಗಳು ಮತ್ತು ಕಾಲೇಜುಗಳಿಂದ ಹೊರಗುಳಿಯುವುದನ್ನು ನಾವು ನೋಡುತ್ತಿದ್ದೇವೆ. ಆದಾಗ್ಯೂ, ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವಾಗ ಯಶಸ್ವಿ ವ್ಯಕ್ತಿಗಳು ಹೊಂದಿದ್ದ "ವಾಸ್ತವ ಆಧಾರಿತ ಸ್ಪಷ್ಟತೆಯ ಮನಸ್ಥಿತಿ" ಯನ್ನು ಗಮನಿಸಲು ವಿಫಲರಾಗಿದ್ದಾರೆ.
ಒಬ್ಬ ವ್ಯಕ್ತಿಯು ತನಗೆ ಮತ್ತು ಸಮಾಜಕ್ಕೆ ಯಾವುದು ಸರಿ ಎಂಬುದನ್ನು ಕಂಡುಕೊಳ್ಳುವ ವಾತಾವರಣವನ್ನು ಶಿಕ್ಷಣ ಒದಗಿಸಬೇಕು ಎಂದು ನಾನು ಭಾವಿಸುತ್ತೇನೆ. ಅಲ್ಲವೇ!
ಬಹುಶಃ ಕೆಲವರು ಮಾತ್ರ ಆಲ್ಬರ್ಟ್ ಐನ್ಸ್ಟೈನ್ ಅವರ ಮಾತುಗಳ ಬಗ್ಗೆ ಯೋಚಿಸುತ್ತಾರೆ;
"ಶಿಕ್ಷಣವು ವಾಸ್ತವಗಳ ಕಲಿಕೆಯಲ್ಲ, ಬದಲಾಗಿ ಯೋಚಿಸಲು ಮನಸ್ಸಿನ ತರಬೇತಿಯಾಗಿದೆ."
"ಎಲ್ಲರೂ ಮೇಧಾವಿಗಳು, ಆದರೆ ನೀವು ಮೀನನ್ನು ಅದರ ಮರವನ್ನು ಏರುವ ಸಾಮರ್ಥ್ಯದಿಂದ ನಿರ್ಣಯಿಸಿದರೆ, ಅದು ತಾನು ಮೂರ್ಖ ಎಂದು ನಂಬಿ ಇಡೀ ಜೀವನವನ್ನು ನಡೆಸುತ್ತದೆ."
ಸಮತೋಲಿತ ಮತ್ತು ಸರಿಯಾಗಿ ನಿರ್ವಹಿಸಿದ ಜೀವನವನ್ನು, ಅಂದರೆ ಅದರ ಎಲ್ಲಾ ಪ್ರಮುಖ ಅಂಶಗಳು ಸರಿಯಾದ ಸ್ಥಳದಲ್ಲಿ ಕಲ್ಪಿಸುವುದು ತುಂಬಾ ಕೂಲ್ ಅಲ್ಲವೇ.
ಆದರೆ "ಕೂಲ್" ಇರುವುದು ಕೇವಲ ಸಾಮಾಜಿಕ ಮಾಧ್ಯಮ (Social Media) ಜೀವನದಲ್ಲಿ ಮಾತ್ರವೇ?
ಮನಮೋಹಕ ಸಿಕ್ಸ್-ಪ್ಯಾಕ್ ಆಬ್ಸ್ ಮತ್ತು ಕೆಜಿಗಟ್ಟಲೆ ತೂಕ ಇಳಿಸಿದ ದೇಹಗಳು "ಆರೋಗ್ಯಕರವಾಗಿ ಕಾಣುವುದು" ಮತ್ತು "ಆರೋಗ್ಯಕರವಾಗಿ ಇರುವುದು" ಇವುಗಳ ನಡುವಿನ ವ್ಯತ್ಯಾಸವನ್ನು ಕಿರಿದಾಗಿಸುತ್ತಿವೆ.
ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸೆಲೆಬ್ರಿಟಿಗಳು ಅಥವಾ ನಕಲಿ ಫಿಟ್ನೆಸ್ ಐಕಾನ್ಗಳಿಂದ ತಪ್ಪಾಗಿ ಪ್ರಭಾವಿತವಾಗಿರುವುದು ಪ್ರಬಲ ಕಾರಣಗಳಲ್ಲಿ ಒಂದಾಗಿದೆ.
ಫಿಟ್ನೆಸ್ ಉತ್ಸಾಹಿಗಳಿಂದ ಪ್ರೇರೇಪಿಸಲ್ಪಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ನಾನು ಭಾವಿಸುತ್ತೇನೆ.
ಫಿಟ್ನೆಸ್ನ ಮೂಲ ವ್ಯಾಖ್ಯಾನವು ಒಂದೇ ಆಗಿದ್ದರೂ, ಪ್ರತಿಯೊಬ್ಬ ವ್ಯಕ್ತಿಯ ಫಿಟ್ನೆಸ್ ಅವಶ್ಯಕತೆಗಳಲ್ಲಿ, ಅದನ್ನು ಸಾಧಿಸುವ ಮತ್ತು ನಿರ್ವಹಿಸುವ ವಿಧಾನಗಳಲ್ಲಿ ವ್ಯತ್ಯಾಸಗಳಿವೆ ಎಂದು ನಾನು ಗಮನಿಸಿದ್ದೇನೆ ಹಾಗೂ ಕಲಿತಿದ್ದೇನೆ.
ಸಹಜವಾಗಿ, ಆರೋಗ್ಯ ಮತ್ತು ಫಿಟ್ನೆಸ್ ಕಡೆಗೆ ಗಮನಹರಿಸುವುದು ಪ್ರತಿಯೊಬ್ಬರಿಗೂ ಮುಖ್ಯವಾಗಿದೆ. ಆದರೆ ಸೈನಿಕರು, ಚಲನಚಿತ್ರ ತಾರೆಯರು ಮತ್ತು ವಿವಿಧ ವರ್ಗಗಳ ಕ್ರೀಡಾ ವೃತ್ತಿಪರರ ಅಗತ್ಯತೆಗಳು ಮತ್ತು ಪ್ರಕ್ರಿಯೆಗಳು ಎಲ್ಲರಿಗೂ ಅನ್ವಯಿಸುವುದಿಲ್ಲ ಎಂಬ ಅಂಶವನ್ನು ಮರೆಯುವಂತಿಲ್ಲ.
ಆನ್ಲೈನ್ ಮಾರ್ಕೆಟಿಂಗ್ ನನ್ನ ವೃತ್ತಿಜೀವನದ ಭಾಗವಾಗಿರುವುದರಿಂದ, ನಾನು ಒಂದು ಉದಾಹರಣೆ ನೀಡಲು ಬಯಸುತ್ತೇನೆ.
"ತೂಕ ಇಳಿಕೆ" ಎನ್ನುವುದು ಸಾರ್ವಜನಿಕರಿಗೆ ಅನೇಕ ಉತ್ಪನ್ನಗಳು ಮತ್ತು ಸೇವೆಗಳನ್ನು ಮಾರಾಟ ಮಾಡಲು ಹೆಚ್ಚು ಬಳಸಲಾಗುವ ಪ್ರಮುಖ ಪದಗಳಲ್ಲಿ ಮುಖವಾದವುಗಳು. ನಾನು ಆರೋಗ್ಯ ವೃತ್ತಿಪರರೊಂದಿಗೆ ಪರಿಶೀಲಿಸಿದಾಗ, ದೇಹದ ತೂಕವು ಕೊಬ್ಬುಗಳೊಂದಿಗೆ ನೀರು, ಮೂಳೆ ಸಾಂದ್ರತೆ ಮತ್ತು ಇತರ ರೀತಿಯ ತೂಕವನ್ನು ಒಳಗೊಂಡಿರುತ್ತದೆ ಎಂದು ತಿಳಿದೆ. ಆದ್ದರಿಂದ ತಮಗಿಷ್ಟಬಂದಂತೆ "ತೂಕ ಇಳಿಕೆ"ಯನ್ನು ಗುರಿಯಾಗಿಸುವುದು ಮತ್ತು ಕೆಲವು ತರಬೇತಿಯಿಲ್ಲದ ಹಂತಗಳನ್ನು ಕಾರ್ಯಗತಗೊಳಿಸುವುದು ಅನೇಕ ರೋಗಗಳಿಗೆ ಕಾರಣವಾಗಬಹುದು.
ಅದೇ ರೀತಿ "ಮಾನಸಿಕ ಆರೋಗ್ಯ" ಮತ್ತೊಂದು ವಿಷಯ. ಇದರ ಕುರಿತು ಅಂತರ್ಜಾಲ ಸೇರಿದಂತೆ ಪ್ರಪಂಚದಲ್ಲಿ ಲೆಕ್ಕವಿಲ್ಲದಷ್ಟು ವಿಚಾರಗಳು ಮತ್ತು ಸಲಹೆಗಳು ಹರಿದಾಡುತ್ತಿವೆ.
ಮುಖ್ಯವಾಗಿ, ಸರಿಯಾದ ಮೂಲಗಳನ್ನು ಆಧರಿಸಿದ ಸ್ವಯಂ-ಕಲಿಕೆಯು ಆರೋಗ್ಯವನ್ನು ಮತ್ತು ನಾವು ನೋಡಲಿರುವ ಮುಂದಿನ ವಿಷಯಗಳನ್ನು ಸರಿಯಾಗಿ ನಿರ್ವಹಿಸುವ ಅಸ್ತ್ರವಾಗಿದೆ.
ಹೌದು! "ಆರೋಗ್ಯವೇ ಸಂಪತ್ತು", ಆದರೆ ಆ ಸಂಪತ್ತು ಮಾತ್ರ ಆರಾಮವಾಗಿ ಬದುಕಲು ಸಾಕಾಗೋದಿಲ್ಲ ತಾನೇ?
ಆಗ ನಾವು ಗಮನಿಸಿದ ಶಿಕ್ಷಣ/ಕಲಿಕೆಯ ರೀತಿ ಇಲ್ಲಿಗೂ ಅನ್ವಯಿಸುತ್ತದೆ.
ಜೀವನದ ಪಯಣದಲ್ಲಿ ಸಂಪತ್ತಿನ ನಿರ್ವಹಣೆಯ ಕುರಿತು ನಾನು ಗಮನಿಸಿದ ಕೆಲವು ಅಂಶಗಳು.
ಗಳಿಕೆ/ಆದಾಯ: ವ್ಯಾಪಾರ, ಪೂರ್ಣ ಸಮಯದ ಕಾರ್ಪೊರೇಟ್ ಉದ್ಯೋಗಗಳು, ವಿವಿಧ ವೃತ್ತಿಗಳು, ಸ್ವತಂತ್ರ ಉದ್ಯೋಗ ರೀತಿಗಳು ಅಥವಾ ಕಲೆಗಳು - ಹೀಗೆ ಎಲ್ಲಾ ಮಾರ್ಗಗಳು ತಮ್ಮದೇ ಆದ ಧನಾತ್ಮಕ ಮತ್ತು ಋಣಾತ್ಮಕತೆಗಳನ್ನು ಹೊಂದಿವೆ. 'ಶ್ರೇಷ್ಠತೆ' ಆಧಾರಿತ ಹೋಲಿಕೆ ಅನಗತ್ಯ ಎಂಬುದು ನನ್ನ ಅನಿಸಿಕೆ.
ಖರ್ಚು: ಸಾಮಾನ್ಯವಾಗಿ ಜನರು ತಮ್ಮ ಅಗತ್ಯತೆಗಳು, ಆಸೆಗಳು ಮತ್ತು ಬಯಕೆಗಳಿಗೆ ಹಣವನ್ನು ಖರ್ಚು ಮಾಡುತ್ತಾರೆ. ಇವುಗಳ ವ್ಯಾಖ್ಯಾನವು ಆದಾಯ, ಖರ್ಚು ಮಾಡುವ ಶಕ್ತಿ, ಹಂತಗಳು ಮತ್ತು ಜೀವನದ ವಿವಿಧ ಸನ್ನಿವೇಶಗಳಿಗೆ ಅನುಗುಣವಾಗಿ ಬದಲಾಗುತ್ತದೆ.
ಹೂಡಿಕೆ: ಸಂಯೋಜಿತ ಮೌಲ್ಯಗಳನ್ನು ಪರಿಗಣಿಸಿ ಸ್ವತ್ತುಗಳಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯದ ಉಳಿತಾಯ ಮತ್ತು ಸಂಪತ್ತಿನ ಬೆಳವಣಿಗೆಯ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಆರ್ಥಿಕ ಸ್ವಾತಂತ್ರ್ಯಕ್ಕೆ ಕಾರಣವಾಗುವ ಉತ್ತಮ ಕೌಶಲ್ಯಗಳಲ್ಲಿ ಒಂದಾಗಿದೆ.
ಅಪಾಯದ ನಿರ್ವಹಣೆ: ಆರೋಗ್ಯ, ಜೀವನ ಮತ್ತು ಇತರ ವಸ್ತು ವಿಷಯಗಳಂತಹ ವಿವಿಧ ಅಂಶಗಳಲ್ಲಿ ಒಳಗೊಂಡಿರುವ ಸಂಭವನೀಯ ಅಪಾಯಗಳನ್ನು ಸರಿದೂಗಿಸಲು ಹಣಕಾಸು ವ್ಯವಸ್ಥೆಯಲ್ಲಿ ವಿಮೆಯು ಉತ್ತಮ ಆಯ್ಕೆಯಾಗಿದೆ. ದುಃಖಕರವೆಂದರೆ, ವಿಮೆಯಿಂದ ಕೇವಲ ಹಣ ವ್ಯರ್ಥ ಅಥವಾ ವಿಮೆ ಅತ್ಯುತ್ತಮ ಹೂಡಿಕೆಯ ಆಯ್ಕೆ ಎಂದು ಭಾವಿಸುವ ಹೆಚ್ಚಿನ ಸಂಖ್ಯೆಯ ಜನರಿದ್ದಾರೆ.
ತೆರಿಗೆ: ಜನರು ಸಾಮಾನ್ಯವಾಗಿ ತೆರಿಗೆ ಪದವನ್ನು ಬಳಸುತ್ತಾರೆ. ಆದರೆ ಹೆಚ್ಚಿನ ಜನರು ತಾವು ತೆರಿಗೆಯನ್ನು ಏಕೆ ಪಾವತಿಸುತ್ತಾರೆ, ಹೇಗೆ ಪಾವತಿಸುತ್ತಾರೆ, ಎಷ್ಟು ಪಾವತಿಸುತ್ತಾರೆ ಮತ್ತು ಇತರ ಸಂಬಂಧಿತ ಅಂಶಗಳ ತಿಳುವಳಿಕೆಯನ್ನು ನಿರಾಕರಿಸುತ್ತಾರೆ. ಅದು ಅವರ ದೈನಂದಿನ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಏನಂತೀರಿ?
ಊಹೆಗೂ ನಿಲುಕದ ರೀತಿಯಲ್ಲಿ ಮಾನವನ ಜೀವನಕ್ಕೆ ಪೂರಕವಾದ ಅನುಕೂಲಗಳು ನಿರಂತರವಾಗಿ ಸುಧಾರಿಸುತ್ತಿದೆ. ವೇಗವಾದ ತಾಂತ್ರಿಕ ಅಭಿವೃದ್ಧಿ ಇದಕ್ಕೊಂದು ಮುಖ್ಯ ಕಾರಣ ಎಂದರೆ ತಪ್ಪಲ್ಲ.
ಆದರೆ "ಸಂತೋಷ" ಎಲ್ಲಿ ಮತ್ತು ಹೇಗಿದೆ?
ದಿನನಿತ್ಯದ ಜೀವನದಲ್ಲಿ ನಾವು ಮಾಡುವ ಕ್ರಿಯೆಗಳ ಸುಲಭತೆಯು ಬಹುಷಃ ವಾದಯೋಗ್ಯ ವಿಷಯವಾಗಿದೆ. ಆದರೆ ಇದು ಬಹುಪಾಲು ಜನರು ಬಯಸುತ್ತಿರುವ "ಸಂತೋಷ"ಕ್ಕೆ ಸಮಾನವಾಗಿಲ್ಲ, ಅಲ್ಲವೇ?
ಮಾನವ ಜೀವನದಲ್ಲಿ ಸಂತೋಷಕ್ಕೆ "ಆರೋಗ್ಯಕರ ಸಂಬಂಧಗಳು" ನೇರ ಕಾರಣ ಎಂಬುದು ಹಾರ್ವರ್ಡ್ ವಿಶ್ವವಿದ್ಯಾಲಯವು ನಡೆಸಿದ 80+ ವರ್ಷಗಳ ಅಧ್ಯಯನದಲ್ಲಿ ಬಹಿರಂಗಗೊಂಡ ಅಂಶವಾಗಿದೆ. ವಾಸ್ತವವಾಗಿ, ನನ್ನ ವೀಕ್ಷಣೆ ಮತ್ತು ಸೀಮಿತ ಕಲಿಕೆಯು ಅದನ್ನೇ ಹೇಳಿದೆ.
ಸಂಬಂಧಗಳನ್ನು ನಿರ್ವಹಿಸುವುದು ಅದರ ಕುರಿತು ಮಾತನಾಡುವಷ್ಟು ಸುಲಭವೇನೂ ಅಲ್ಲ.
ಹಾಗಂತ ಈ ವಿಚಾರವನ್ನು ಸುಮ್ಮನೆ ಬಿಡುವಂತಿಲ್ಲ. ಒಂದು ಸೆಕೆಂಡಿನಲ್ಲಿ, ಎಲ್ಲವೂ ಪರಿಪೂರ್ಣವಾಗಿ ಕಾಣುತ್ತದೆ, ಮುಂದಿನ ಕ್ಷಣ ಅದು ಭಯಾನಕವಾಗಿದೆ. ಹಾಗಾಗಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲು ಜೀವನವು ನಮ್ಮನ್ನು ಒತ್ತಾಯಿಸುತ್ತದೆ. ಆದರೆ ಎಲ್ಲರಿಗೂ ಸೂಕ್ತವಾದ ಯಾವುದೇ ನಿರ್ಧಿಷ್ಟ ಮಾದರಿಗಳು ಅಥವಾ ನಿಖರವಾಗಿ ವ್ಯಾಖ್ಯಾನಿಸಲಾದ ಕ್ರಮಗಳಿಲ್ಲ. ಸಂಬಂಧಗಳು ಕ್ರಿಯಾತ್ಮಕವಾಗಿರುತ್ತವೆ ಮತ್ತು ನಿರಂತರವಾಗಿ ಅನೇಕ ಬದಲಾವಣೆಗಳಿಗೆ ಒಳಪಟ್ಟಿರುತ್ತವೆ.
ಕಡಿಮೆ ಸಂಘರ್ಷಗಳೊಂದಿಗೆ ಸಂಬಂಧಗಳನ್ನು ನಿರ್ವಹಿಸುವ ಜನರಲ್ಲಿ ಗುರುತಿಸಬಹುದಾದ ಅಂಶಗಳು ಇಲ್ಲಿವೆ;
ಜೀವನದಲ್ಲಿ ಸಂಬಂಧಗಳ ಪಾತ್ರವನ್ನು ಗುರುತಿಸುವುದು.
"ಸರಿಯಾದ ಸಂಬಂಧಗಳು" ಎಂಬುದರ ವ್ಯಾಖ್ಯಾನವನ್ನು ಪ್ರಶ್ನಿಸುವುದು.
ಸುತ್ತುವರೆದಿರುವ ಸಂಬಂಧಗಳಿಗೆ ಸರಿಯಾದ ಆದ್ಯತೆ ನೀಡುವುದು.
ಅಗತ್ಯಕ್ಕೆ ತಕ್ಕ ಹಾಸ್ಯ ಪ್ರಜ್ಞೆ.
ಹೊಂದಿಕೊಳ್ಳುವ ಮನಸ್ಥಿತಿ.
ಹೌದು! ಹೊಂದಿಕೊಳ್ಳುವ ಅಥವಾ ಆರೋಗ್ಯಕರ ಮನಸ್ಥಿತಿ ನಾವು ಈವರೆಗೆ ನೋಡಿದ ಎಲ್ಲಾ ಅಂಶಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಆರೋಗ್ಯ ನಿರ್ವಹಣೆಯ ಬಗೆಗೆ ಹೇಳುವಾಗ ಉಲ್ಲೇಖಿಸಲಾದ ಆರೋಗ್ಯಕರ ಮನಸ್ಸು ಮತ್ತು ಸಂಬಂಧಗಳ ನಡುವಿನ ಸಂಪರ್ಕವು ನೆನಪಿದೆಯೇ?
ಇದೇ ಅಲ್ಲವೇ?
ಜೀವನದ ವಿವಿಧ ಅಂಶಗಳನ್ನು ಕಲಿಯಲು ಮತ್ತು ನಿರ್ವಹಿಸಲು ಮನಸ್ಸು ಒಂದು ಪ್ರಮುಖ ಸಾಧನವಾಗುತ್ತದೆ.
ಆದರೆ ಸಮಾಜದಲ್ಲಿ, ಯಾವುದೇ ರೀತಿಯ ದೇಹದ ಅಸಾಮಾನ್ಯ ರೂಪವನ್ನು ನಿರ್ವಹಿಸುವುದು ಅಥವಾ ಜೀವನದ ಯಾವುದೇ ಅಂಶಗಳಲ್ಲಿ ಆಳವಾದ ಅಸಮತೋಲನದಂತಹ ಹೆಚ್ಚುವರಿ ಸವಾಲನ್ನು ಎದುರಿಸುವ ಸಂಧರ್ಭಗಳಲ್ಲಿ ಇತರರ ಅಥವಾ ಒಬ್ಬರ ಸ್ವಂತ ಮಿದುಳಿನಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ನನ್ನ ವೈಯಕ್ತಿಕ ಮತ್ತು ವೃತ್ತಿಪರ ಜೀವನದಿಂದಾಗಿ, ಆರೋಗ್ಯ, ಸಂಪತ್ತು, ಸಂಬಂಧಗಳು ಮತ್ತು ಸಾಮಾನ್ಯ ಸಾಧನ / ಸಮತೋಲನದ ಅಸ್ತ್ರವಾದ ಮನಸ್ಸಿನ ಅಧ್ಯಯನ ಮುಖ್ಯವಾಯಿತು.