ನಾನು ಅಕ್ಟೋಬರ್ 1994 ರಲ್ಲಿ ಭಾರತದ ಕರ್ನಾಟಕದಲ್ಲಿ ಜನಿಸಿದೆ. ವೈವಿಧ್ಯಮಯ ಸಂಬಂಧಗಳು, ಸ್ನೇಹಿತರು ಮತ್ತು ಕೃಷಿ ಚಟುವಟಿಕೆಗಳನ್ನು ಒಳಗೊಂಡ ವಾತಾವರಣ ನನ್ನ ಹಿನ್ನಲೆಯ ವಿಶೇಷವಾಗಿದೆ.
10 ನೇ ತರಗತಿಯ ನಂತರ ಪ್ರಿ-ಯೂನಿವರ್ಸಿಟಿಯಲ್ಲಿ ವಾಣಿಜ್ಯವು ಪ್ರಮುಖ ವಿಷಯವಾಗಿತ್ತು. ಮುಂದೆ ಔಪಚಾರಿಕ ಶಿಕ್ಷಣದ ಭಾಗವಾಗಿ ಬಿ ಕಾಮ್ ಮತ್ತು ಎಂ ಕಾಮ್ ಅನ್ನು ಅಧ್ಯಯನ ಮಾಡಿದೆ.
ವ್ಯಾಪಾರ ಅಧ್ಯಯನಗಳು, ಮಾರ್ಕೆಟಿಂಗ್, ನಿರ್ವಹಣೆ, ಹಣಕಾಸು, ವೆಚ್ಚ, ತೆರಿಗೆಯಂತಹಾ ವಾಣಿಜ್ಯ ವಿಷಯಗಳು ಮತ್ತು ಕಲಿಕೆಯ ವಾತಾವರಣ ನನ್ನ ಶೈಕ್ಷಣಿಕ ಪ್ರಯಾಣವನ್ನು ಬಹುತೇಕ ಸಮಗ್ರವಾಗಿಸಿತು.
ವ್ಯಾಪಾರ-ವ್ಯವಹಾರಗಳ ವಾಸ್ತವಗಳನ್ನು ತಿಳಿಯಲು ನಾನು ಎಂ ಕಾಮ್ ನಂತರ ಮಾರಾಟ ಕಾರ್ಯನಿರ್ವಾಹಕನಾಗಿ ಕೆಲಸ ಮಾಡಿದೆ. ಸಂಸ್ಥೆಯನ್ನು ಪ್ರತಿನಿಧಿಸುವ ಮೂಲಕ,ನಾನು ಸಣ್ಣ ಸ್ಥಳೀಯ ಅಂಗಡಿಗಳು, ಮಾಲ್ಗಳು, ವೈದ್ಯಕೀಯ ಮಳಿಗೆಗಳು, ಸ್ಟಾರ್ ಹೋಟೆಲ್ಗಳು ಸೇರಿದಂತೆ ಇನ್ಫೋಸಿಸ್ ಕ್ಯಾಂಪಸ್ಗೂ ಭೇಟಿ ನೀಡಿದ್ದೇನೆ. ನನ್ನ ಕಲಿಕೆ ಮತ್ತು ಸಂಸ್ಥೆಯ ಸಹಕಾರದಿಂದ ವೃತ್ತಿ ಬದುಕಿಗೆ ಒಳ್ಳೆಯ ಅಡಿಪಾಯವಾಯಿತು.
ನಂತರ ಬಿಸಿನೆಸ್ ಗಳ ಬೆಳವಣಿಗೆಗೆ ಸಹಕರಿಸುವ ಉದ್ದೇಶದಿಂದ OnlineShree (onlineshree.com) ಎಂಬ ಆನ್ಲೈನ್ ಮಾರ್ಕೆಟಿಂಗ್ ಏಜೆನ್ಸಿ ರಚಿಸಲಾಯಿತು.
ವಿವಿಧ ಅನುಭವಗಳು, ಬೇರೆ ಬೇರೆ ರೀತಿಯಲ್ಲಿ ವಿನಿಮಯಗೊಳ್ಳುತ್ತಿದ ಜ್ಞಾನವನ್ನು ಗಮನಿಸುತ್ತಾ ಹೋದಂತೆ ನಿರಂತರ ಕಲಿಕೆ ಮತ್ತು ಪರಸ್ಪರ ವಿಷಯಗಳ ಹಂಚಿಕೆಯ ಮಹತ್ವದ ಅರಿವಿನಿಂದ SharingShree ಹಾಗೂ SharingShree ಕನ್ನಡ ಬ್ಲಾಗ್ ಗಳು ಹುಟ್ಟಿಕೊಂಡವು.